ವಿಧಾನಸೌಧದಲ್ಲಿ ಬಿಯರ್ ಬಾಟಲ್; ಶಕ್ತಿಸೌಧದಲ್ಲೇ ಮದ್ಯಪಾನ ಮಾಡಿದ್ದು ಯಾರು.?

ಬೆಂಗಳೂರು| Ramya kosira| Last Modified ಸೋಮವಾರ, 13 ಸೆಪ್ಟಂಬರ್ 2021 (12:51 IST)
ಬೆಂಗಳೂರು : ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಎರಡನೇ ಮಹಡಿಯಲ್ಲಿ ಇದೀಗ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ಶಕ್ತಿಸೌಧ ಕುಡುಕರಿಗೆ ಬಳಕೆಯಾಗುತ್ತಿದೆಯೇ ಎಂಬ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ವಿಧಾನಸೌಧದ ಎರಡನೇ ಮಹಡಿಯಲ್ಲಿರುವ 208ರ ಕೊಠಡಿ ಬಳಿ ಎರಡು ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ಈ ಕುರಿತ ಫೋಟೋ ಭಾರಿ ವೈರಲ್ ಆಗಿದೆ. ಶಕ್ತಿಸೌಧದಲ್ಲಿಯೇ ಮದ್ಯಪಾನ ಮಾಡಿ ಬಿಯರ್ ಬಾಟಲ್ ಗಳನ್ನು ಬಿಟ್ಟು ಹೋಗಿದ್ದಾ ? ಎಂಬ ಪ್ರಶ್ನೆ ಮನೆಮಾಡಿದೆ.
ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುವ ವಿಧಾನಸೌಧದಲ್ಲಿಯೇ ಮದ್ಯಪಾನ ಮಾಡಿರುವಂತ ಅಪಚಾರಕ್ಕೆ ಶಕ್ತಿಸೌಧ ಸಾಕ್ಷಿಯಾಯಿತೇ ? ಬಿಯರ್ ಬಾಟಲ್ ಗಳನ್ನು ವಿಧಾನಸೌಧದಲ್ಲಿ ತಂದಿಟ್ಟವರಾದರೂ ಯಾರು ? ವಿಧಾನಸೌಧದಲ್ಲಿ ಕುಳಿತು ಎಣ್ಣೆ ಪಾರ್ಟಿ ನಡೆಸಿ ವಿಧಾನಸೌಧದ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾದರು ಯಾರು ಎಂಬ ಹಲವು ಪ್ರಶ್ನೆಗಳು ಮೂಡಿವೆ.
 
ಇದರಲ್ಲಿ ಇನ್ನಷ್ಟು ಓದಿ :