ಬೆಳ್ಳಂ ಬೆಳ್ಳಗೆ ಎಸಿಬಿ ಅಧಿಕಾರಿಗಳ ದಾಳಿ!

ಗದಗ| Ramya kosira| Last Modified ಬುಧವಾರ, 24 ನವೆಂಬರ್ 2021 (08:03 IST)


ಗದಗದಲ್ಲೂ ಬೆಳ್ಳಂ ಬೆಳ್ಳಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪ ಮನೆ ಮೇಲೆ ಸುಮಾರು 8ಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಳಿ ನಡೆಸಲಾಗಿದೆ. ನಗರದ ಹುಡ್ಕೋ ಕಾಲೋನಿಯಲ್ಲಿರುವ ಮನೆ ಸೇರಿದಂತೆ ಅಧಿಕಾರಿ ರುದ್ರೇಶಪ್ಪಗೆ ಸಂಬಂಧಿಸಿದ ಐದು ಕಡೆ ಮನೆಗಳಲ್ಲಿ ಎಸಿಬಿ ಅಧಿಕಾರಿಗಳ ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ರುದ್ರೇಶ್ರನ್ನ ಪಕ್ಕದಲ್ಲೇ ಕೂರಿಸಿಕೊಂಡು, ಅವರ ಮನೆಯಲ್ಲಿ ದೊರೆತ ಕಡತಗಳು, ಕಂಪ್ಯೂಟರ್ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಸೇರಿದಂತೆ ಶಿವಮೊಗ್ಗ, ದಾವಣಗೆರೆಯಲ್ಲೂ ರುದ್ರೇಶ್ ಮನೆಗಳನ್ನ ಹೊಂದಿದ್ದು, ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :