ಮತ್ತೆ ಖಾತೆ ಅದಲು ಬದಲು ಆಟ ಶುರು ಮಾಡಿದ ಸಿಎಂ

ಬೆಂಗಳೂರು| pavithra| Last Modified ಸೋಮವಾರ, 25 ಜನವರಿ 2021 (12:09 IST)
ಬೆಂಗಳೂರು : ಮತ್ತೆ ಖಾತೆ ಅದಲು ಬದಲು ಮಾಡಲು ಸಿಎಂ ಬಿಎಸ್ ವೈ ನಿರ್ಧಾರ ಮಾಡಿದ್ದು, ಸಿಎಂ ಈ ಅದಲು ಬದಲು ಆಟಕ್ಕೆ ಸಚಿವರು ಸುಸ್ತಾಗಿ ಹೋಗಿದ್ದಾರೆ ಎನ್ನಲಾಗಿದೆ.

ಖಾತೆ ಅದಲು ಬದಲಿನಿಂದ ಸಚಿವರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಸುಧಾಕರ್ ಗೆ ವೈದ್ಯಕೀಯ ಖಾತೆ ವಾಪಾಸ್ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಹಾಗೇ ಸಚಿವ ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಖಾತೆ , ಹಜ್, ವರ್ಕ್ಸ್ ಖಾತೆಯೂ ವಾಪಾಸ್ ಪಡೆದು ಸಚಿವ ಆನಂದ್ ಸಿಂಗ್ ಬಳಿಯಿದ್ದ ಪ್ರವಾಸೋದ್ಯಮ, ಪರಿಸರ ಖಾತೆ ಕೂಡ ವಾಪಾಸ್ ಪಡೆಯಲು ಸಿಎಂ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.  ಇದರಲ್ಲಿ ಇನ್ನಷ್ಟು ಓದಿ :