ಸಚಿವರ ಜೊತೆ ಇಂದು ಅರುಣ್ ಸಿಂಗ್ ‘ಏಕಾಂತ’ದ ಮೀಟಿಂಗ್

ಬೆಂಗಳೂರು| Krishnaveni K| Last Modified ಬುಧವಾರ, 16 ಜೂನ್ 2021 (08:56 IST)
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಿರುಗಾಳಿ ಎಬ್ಬಿಸಿದೆ. ಈ ಸಂಬಂಧ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎಲ್ಲಾ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.  
> ಪ್ರತಿಯೊಬ್ಬ ಸಚಿವರನ್ನೂ ಪ್ರತ್ಯೇಕವಾಗಿ ಕರೆದು ಅವರ ಅಭಿಪ್ರಾಯ ಕೇಳಲಿರುವ ಅರುಣ್ ಸಿಂಗ್ ಕೆಲವು ಸಲಹೆ ಸೂಚನೆಯನ್ನೂ ನೀಡಲಿದ್ದಾರೆ. ಈ ಸಭೆಗೆ ಸಚಿವರು ತಮ್ಮ ಆಪ್ತರನ್ನು ಕರೆದುಕೊಂಡು ಬರುವಂತಿಲ್ಲ. ಕೇವಲ ಅರುಣ್ ಸಿಂಗ್ ಮತ್ತು ಆಯಾ ಸಚಿವರ ನಡುವೆ ಪ್ರತ್ಯೇಕವಾಗಿ ಸಭೆ ನಡೆಯಲಿದೆ.>   ಇಂದು ಬಿಜೆಪಿ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ನಾಯಕತ್ವ ಬದಲಾವಣೆ ಕುರಿತಾಗಿ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡದಂತೆಯೂ ಸೂಚನೆ ನೀಡುವ ಸಾಧ್ಯತೆಯಿದೆ.



ಇದರಲ್ಲಿ ಇನ್ನಷ್ಟು ಓದಿ :