ಆ್ಯಪ್ ಮತ್ತು ವೆಬ್‍ಸೈಟ್‍ನಲ್ಲಿ ಬೆಟ್ಟಿಂಗ್ ರೇಶ್ಯೂ

bangalore| geetha| Last Modified ಸೋಮವಾರ, 11 ಅಕ್ಟೋಬರ್ 2021 (21:49 IST)
ಬೆಂಗಳೂರು: ಆ್ಯಪ್ ಮತ್ತು ವೆಬ್‍ಸೈಟ್‍ನಲ್ಲಿ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ, 4 ಲಕ್ಷ ಹಣ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಪಟ್ಟೆಗಾರಪಾಳ್ಯ, ಬಿಡಿಎ ಲೇಔಟ್, 1ನೆ ಮುಖ್ಯರಸ್ತೆ, ಕೀರ್ತಿ ಹೊಟೇಲ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆರ್ ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್-ಸನ್‍ರೈಸರ್ಸ್ ಹೈದರಾಬಾದ್ ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಿಸಿದಂತೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಟಿ-20 ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದನು. 
ಅಬೆಕ್ಸ್ ಡಾಟ್‍ಕಾಮ್ ಎಂಬ ಆ್ಯಪ್-ವೆಬ್‍ಸೈಟ್ ಮೂಲಕ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್‍ನಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದನು.


ಇದರಲ್ಲಿ ಇನ್ನಷ್ಟು ಓದಿ :