Widgets Magazine

‘ಹಿಂದೂ ರಾಷ್ಟ್ರ ನಿರ್ಮಾಣ ಅನ್ನೋದು ಬಿಜೆಪಿಯ ಭ್ರಮೆ’

ರಾಯಚೂರು| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (11:38 IST)
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ನಿರ್ಮಾಣ ಮಾಡೋಕೆ ಬಿಜೆಪಿ ಮುಂದಾಗಿರೋದು ಕೇವಲ ಭ್ರಮೆಯಲ್ಲಿ ಸಾಧಿಸಲಿದೆ.

ಹೀಗಂತ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡಿದ್ದಾರೆ.

ಆರ್ ಎಸ್ ಎಸ್ ನ ಅಜೆಂಡಾವನ್ನು ಕೇಂದ್ರದಲ್ಲಿರೋ ಬಿಜೆಪಿ ನೇತೃತ್ವದ ಸರಕಾರ ಜಾರಿ ಮಾಡೋಕೆ ಸತತ ಪ್ರಯತ್ನ ನಡೆಸುತ್ತಿದೆ.

ಆದರೆ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ನಿರ್ಮಾಣ ಮಾಡೋದು ಯಾವ ಕಾಲಕ್ಕೂ ಸಾಧ್ಯವಾಗೋದಿಲ್ಲ. ಬಿಜೆಪಿ ಕನಸು ನನಸಾಗೋದಿಲ್ಲ ಅಂತ ಹೆಚ್.ಡಿ.ದೇವೇಗೌಡರು ವ್ಯಂಗ್ಯವಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :