ಆಸ್ಪತ್ರೆಯ ಬಾಗಿಲಲ್ಲೇ ಹೆರಿಗೆ; ಮಗು ಸಾವು

ಮಂಡ್ಯ| pavithra| Last Modified ಬುಧವಾರ, 26 ಮೇ 2021 (10:58 IST)
: ಗರ್ಭಿಣಿಗೆ ಆಸ್ಪತ್ರೆಯ ಬಾಗಿಲಲ್ಲೇ ಹೆರಿಗೆಯಾದ ಹಿನ್ನಲೆಯಲ್ಲಿ ಮಗು ಸಾವನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗರ್ಭಿಣಿಯನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಬೆಳಿಗ್ಗೆಯಿಂದ ಕಾದರು ಆಸ್ಪತ್ರೆಯ ಸಿಬ್ಬಂದಿಗಳು ಗರ್ಭಿಣಿಯನ್ನು ದಾಖಲಿಸಿಕೊಳ್ಳದ ಹಿನ್ನಲೆಯಲ್ಲಿ ಆಕೆಗೆ ಆಸ್ಪತ್ರೆಯ ಬಾಗಿಲಿನಲ್ಲಿಯೇ ಹೆರಿಗೆಯಾಗಿದ್ದು, ಇದರಿಂದ ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವನಪ್ಪಿದೆ. ಜಿಲ್ಲಾಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ ಎನ್ನಲಾಗಿದೆ.> >


ಇದರಲ್ಲಿ ಇನ್ನಷ್ಟು ಓದಿ :