ಮಳೆ ಪರಿಸ್ಥಿತಿ ವೀಕ್ಷಿಸಿದ ಸಿಎಂ

ಬೆಂಗಳೂರು| geetha| Last Modified ಬುಧವಾರ, 24 ನವೆಂಬರ್ 2021 (15:39 IST)
ನಗರದಲ್ಲಿ ಹೆಚ್ಚು ಮಳೆ ಬಂದಾಗ ರಾಜಕಾಲುವೆಗಳಿಂದ ನೀರು ಹೊರ ಹರಿಯುವ ಸಮಸ್ಯೆ, ಅವುಗಳ ರಿಪೇರಿ ಮತ್ತು ಕಾಲುವೆಗಳಿಂದ ನೀರನ್ನು ಬೇರೆಡೆ ತಿರುಗಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಮಳೆಯಿಂದ ಬಾಧಿತವಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರ ಜತೆ ಮಾತನಾಡಿದರು.
 
ನಗರದಲ್ಲಿರುವ ರಾಜಕಾಲುವೆಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.


ಇದರಲ್ಲಿ ಇನ್ನಷ್ಟು ಓದಿ :