ಮತ್ತೆ ಹೆಚ್ಚುತ್ತಿದೆ ಕೊರೋನಾ, ಎಚ್ಚರ ತಪ್ಪಿದರೆ ಮೂರನೇ ಅಲೆ ಖಂಡಿತಾ

ಬೆಂಗಳೂರು| Krishnaveni K| Last Modified ಶನಿವಾರ, 10 ಜುಲೈ 2021 (09:00 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಮುಗಿಯಿತು, ಲಾಕ್ ಡೌನ್ ನಿರ್ಬಂಧಗಳೂ ಸಡಿಲವಾಗಿದೆ. ಈ ಹಿನ್ನಲೆಯಲ್ಲಿ ಜನರೂ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ. ಪ್ರವಾಸೀ ತಾಣಗಳು ತುಂಬಿ ತುಳುಕುತ್ತಿವೆ. ಸಾಮಾಜಿಕ ಅಂತರ ಮರೆತಿದ್ದಾರೆ.
 > ಹೀಗಾಗಿ ಈಗ ಮತ್ತೆ ಪ್ರಕರಣಗಳಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದಾಗಿ ಕೊರೋನಾ ಮೂರನೇ ಅಲೆ ಖಚಿತ ಎಂದೇ ಹೇಳಲಾಗುತ್ತಿದೆ. ಇದು ಕೇಂದ್ರ ಸರ್ಕಾರವನ್ನು ಆತಂಕಕ್ಕೆಡೆಮಾಡಿದೆ.>   ಪ್ರವಾಸೀ ತಾಣಗಳೇ ಪ್ರಮುಖ ಅಪಾಯ ತಾಣಗಳಾಗುತ್ತಿರುವುದು ವಿಪರ್ಯಾಸ. ಲಾಕ್ ಡೌನ್ ನಿಂದಾಗಿ ದಿನಗಟ್ಟಲೇ ಮನೆಯಲ್ಲೇ ಕೂತಿದ್ದ ಜನ ಈಗ ತಂಡೋಪತಂಡವಾಗಿ ಆಗಮಿಸುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ. ಹೀಗಾಗಿ ಈಗಿಂದಲೇ ಮೂರನೇ ಅಲೆ ಎದುರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಇದರಲ್ಲಿ ಇನ್ನಷ್ಟು ಓದಿ :