ರಾಜ್ಯದಲ್ಲಿ ಶೇ.3 ಕ್ಕಿಳಿದ ಕೊರೋನಾ ಪಾಸಿಟಿವಿಟಿ ದರ

ಬೆಂಗಳೂರು| Krishnaveni K| Last Modified ಶುಕ್ರವಾರ, 18 ಜೂನ್ 2021 (09:56 IST)
ಬೆಂಗಳೂರು: ಕೊನೆಗೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಕಳೆದ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.3 ಕ್ಕಿಳಿದಿದೆ.
 > ಹೀಗಾಗಿ ಸೋಮವಾರದಿಂದ ಲಾಕ್ ಡೌನ್ ಸಂಪೂರ್ಣ ಮುಕ್ತವಾಗುವುದು ಪಕ್ಕಾ ಆಗಿದೆ. ಗುರುವಾರ ಒಟ್ಟಾರೆ ಸೋಂಕಿತರ ಸಂಖ್ಯೆ 5,983 ಕ್ಕಿಳಿದಿದೆ. 138 ಸೋಂಕಿತರು ಸಾವನ್ನಪ್ಪಿದ್ದಾರೆ.>   ದೇಶದಲ್ಲೂ ಸೋಂಕಿತರ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 63,480 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 8 ಲಕ್ಷದೊಳಗೇ ಇದ್ದು, ಕಳೆದ 73 ದಿನಗಳಲ್ಲಿ ಇದು ದಾಖಲೆಯಾಗಿದೆ. ಹೀಗಾಗಿ ಸದ್ಯದ ಮಟ್ಟಿಗೆ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದೇ ಹೇಳಬಹುದು.ಇದರಲ್ಲಿ ಇನ್ನಷ್ಟು ಓದಿ :