ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ

ಮೈಸೂರು| pavithra| Last Modified ಶನಿವಾರ, 28 ನವೆಂಬರ್ 2020 (11:39 IST)
ಮೈಸೂರು : ಪ್ರಚಾರದ ಅವಶ್ಯಕತೆ ಇದ್ರೆ ಡಿಸಿ ಹುದ್ದೆಗೆ ರಾಜೀನಾಮೆ ನೀಡಿ ಮೈಸೂರು ಜಿಲ್ಲೆಯಲ್ಲೇ ಚುನಾವಣೆಗೆ ನಿಲ್ಲಿ ಎಂದು ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ ಆಗಿದ್ದಾರೆ.

ಮೈಸೂರಿನಲ್ಲಿ  ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ , ತಮ್ಮ ಪ್ರಚಾರಕ್ಕಾಗಿ ಕೆಲಸ ಮಾಡಬೇಡಿಯೆಂದು ಡಿಸಿ ರೋಹಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಹತ್ತಿರ ಇರುವ ದಾಖಲೆಗಳನ್ನು ಬಹಿರಂಗಪಡಿಸಬಹುದು. ಆದ್ರೆ ಹೆಣ್ಣು ಮಗಳೆಂದು ಸುಮ್ಮನಿದ್ದೇನೆ. ಒಂದೊಂದು ಚುನಾವಣೆ ಐಎಎಸ್ ಗೆ ಸಮ. ಸಿಎಂ ಬಂದರೂ ಆ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಬೇಕು. ಜನರಿಗೆ ಒಳ್ಳೆಯದು ಮಾಡಬೇಕಾದರೆ ಶಾಸಕರ ಜತೆ ಚರ್ಚಿಸಿ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :