ಡಿಸಿಎಂ ನೇತೃತ್ವದಲ್ಲಿ ಇಂದು ಟಾಸ್ಕ್ ಫೋರ್ಸ್ ಸಭೆ: ಅನ್ ಲಾಕ್ ಬಗ್ಗೆ ನಿರ್ಧಾರ

ಬೆಂಗಳೂರು| Krishnaveni K| Last Modified ಸೋಮವಾರ, 7 ಜೂನ್ 2021 (08:59 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಇಂದು ಡಿಸಿಎಂ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ನಡೆಯಲಿರುವ ಟಾಸ್ಕ್ ಫೋರ್ಸ್ ಸಭೆ ಮಹತ್ವ ಪಡೆದುಕೊಂಡಿದೆ.

 

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 7 ರ ಸಮೀಪಕ್ಕೆ ಬಂದಿದ್ದು, ಶೇ. 5ಕ್ಕೆ ಬಂದರೆ ಅನ್ ಲಾಕ್ ಮಾಡುವುದಾಗಿ ಈಗಾಗಲೇ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು.
 
ಮುಂದಿನ ವಾರದ ವೇಳೆಗೆ ಪಾಸಿಟಿವಿಟಿ ದರ ಶೇ.5 ಕ್ಕೆ ಬಂದು ನಿಲ್ಲುವ ಸಾಧ‍್ಯತೆಯಿದೆ. ಹೀಗಾಗಿ ಕೆಲವೊಂದಕ್ಕೆ ವಿನಾಯ್ತಿ ನೀಡುವುದು ಅಥವಾ ಅನ್ ಲಾಕ್ ಪ್ರಕ್ರಿಯೆ ಬಗ್ಗೆ ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧಾರವಾಗುವ ಸಾಧ‍್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :