ತಿಹಾರ ಜೈಲು ಸೇರಿ ಕುಖ್ಯಾತಿಗೊಳಗಾದ ಡಿಕೆ ಶಿವಕುಮಾರ್

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (09:19 IST)
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಗಾಗಿರುವ ಶಾಸಕ ಡಿಕೆ ಶಿವಕುಮಾರ್ ರನ್ನು ತಿಹಾರ್ ಜೈಲ್ ಗೆ ವರ್ಗಾಯಿಸಲಾಗಿದೆ.

 
ಈ ಮೂಲಕ ದೇಶದ ಪ್ರಖ್ಯಾತ ಜೈಲು ಸೇರಿದ ರಾಜ್ಯದ ಮೊದಲ ರಾಜಕಾರಣಿ ಎಂಬ ಕುಖ್ಯಾತಿ ಡಿಕೆಶಿಯದ್ದಾಗಿದೆ. ವಿಶೇಷವೆಂದರೆ ಕಾಂಗ್ರೆಸ್ ಹಿರಿಯ ನಾಯಕ, ಭ್ರಷ್ಟಾಚಾರ ಆರೋಪದಲ್ಲಿ ಬಂಧಿತರಾಗಿರುವ ಪಿ ಚಿದಂಬರಂ ಇರುವ ಸೆಲ್ ಪಕ್ಕದಲ್ಲೇ ಡಿಕೆಶಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
 
ಹಾಗಿದ್ದರೂ ಇವರಿಬ್ಬರು ಭೇಟಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆರ್ಥಿಕ ಅಪರಾಧ ಎದುರಿಸುತ್ತಿರುವವರಿಗೆಂದೇ ಮೀಸಲಾದ ಕೊಠಡಿಯಲ್ಲಿ ಈ ನಾಯಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :