ವಿಚಾರಣೆಗೆ ತೆರಳುವುದಕ್ಕೂ ಮುನ್ನ ಕಣ್ಣೀರು ಹಾಕಿದ ಡಿಕೆಶಿ. ಕಾರಣವೇನು ಗೊತ್ತಾ?

ನವದೆಹಲಿ| pavithra| Last Modified ಸೋಮವಾರ, 2 ಸೆಪ್ಟಂಬರ್ 2019 (11:02 IST)
ನವದೆಹಲಿ : ಇಡಿಯಿಂದ ಇಂದು ಡಿಕೆ ಶಿವಕುಮಾರ್ ವಿಚಾರಣೆ ಹಿನ್ನಲೆಯಲ್ಲಿ ಇಡಿ ವಿಚಾರಣೆಗೆ ತೆರಳುವುದಕ್ಕೂ ಮುನ್ನ ಡಿಕೆಶಿ ಭಾವುಕರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಕ್ರಮ ಆಸ್ತಿ ಹೊಂದಿದ್ದ ಹಿನ್ನಲೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಹಬ್ಬದ ಪ್ರಯುಕ್ತ ಇಂದು ಒಂದು ದಿನ ವಿನಾಯಿತಿ ನೀಡಿ ಎಂದು ಕೇಳಿಕೊಂಡರು. ಆದರೆ  ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.


ಆದಕಾರ ಇಂದು ಇಡಿ ವಿಚಾರಣೆಗೆ ತೆರಳಿದ ಡಿಕೆಶಿವಕುಮಾರ್ ದೆಹಲಿಯ ತಮ್ಮ ಸೋದರ ಡಿಕೆ ಸುರೇಶ್ ನಿವಾಸದ ಬಳಿ, ಇಂದು ತಮ್ಮ ತಂದೆಗೆ  ಎಡೆ ಇಡಲು ಅವಕಾಶ ನೀಡಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :