ಆ ಯುವಕ ಸಾವಿಗೂ ಮುನ್ನ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲೇನಿತ್ತು ಗೊತ್ತಾ?

ದಾವಣಗೆರೆ| Jagadeesh| Last Modified ಮಂಗಳವಾರ, 3 ಜುಲೈ 2018 (16:51 IST)
ಆ ಯುವಕ ಇನ್ನೂ ಜೀವನದಲ್ಲಿ ಬಾಳಿ ಬದುಕಬೇಕಿತ್ತು. ಆದರೆ ಯಾವುದೋ ಒಂದು ವಿಷಯ ಆತನ ಮೇಲೆ ಗಾಢ ಪರಿಣಾಮ ಬೀರಿತ್ತು. ಪರಿಣಾಮ ನೇರವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಪತ್ರ ಬರದೇ ಬಿಟ್ಟ. ಇಷ್ಟಾಗಿದ್ದರೆ ವಿಶೇಷ ಏನೂ ಇರಲಿಲ್ಲ. ಆದರೆ ಸಿಎಂಗೆ ಪತ್ರ ಬರೆದ ಯುವಕ ಬಾರದ ಲೋಕಕ್ಕೆ ಹೋಗಿದ್ದಾನೆ.


ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಿ. ಹೀಗಂತ ಮುಖ್ಯಮಂತ್ರಿಗೆ ಪತ್ರ ಬರೆದ ದಾವಣಗೆರೆಯ ಹೊಸ ನಗರದ ಯುವಕ ಅನೀಲ್ ಬಿ.(22) ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಅಸಲಿಗೆ ಚನ್ನಗಿರಿ ತಾಲೂಕಿನ ಹೊಸನಗರದ ಅನೀಲ್, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಂ.ಎ ಓದುತ್ತಿದ್ದ. ಹಾಗೂ ಸರಕಾರಗಳು ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡುತ್ತಿಲ್ಲ. ವಿದ್ಯಾವಂತರು ಕೂಲಿ ಮಾಡುವಂತಾಗಿದೆ.

ನನ್ನ ಪರಿಸ್ಥಿತಿ ನನ್ನಂತಹ ಬಡವರಿಗೆ ಮಾತ್ರ ಅರ್ಥವಾಗುತ್ತದೆ. ವಿದ್ಯಾವಂತರಿಗೆ ಸರಕಾರ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದರಲ್ಲಿ ಇನ್ನಷ್ಟು ಓದಿ :