ಮದುವೆಯಾಗಿ ಮಗುವಿದ್ದರೂ ಲವರ್ ಜೊತೆ ಸುತ್ತುತ್ತಿದ್ದ ಮಗಳಿಗೆ ತಂದೆ ಮಾಡಿದ್ದೇನು ಗೊತ್ತಾ?

ಬಳ್ಳಾರಿ| pavithra| Last Modified ಬುಧವಾರ, 12 ಫೆಬ್ರವರಿ 2020 (09:35 IST)
ಬಳ್ಳಾರಿ : ಮದುವೆಯಾಗಿ ಒಂದು ಮಗುವಿದ್ದರೂ ಪತಿಯನ್ನು ಬಿಟ್ಟು ಲವರ್ ಜೊತೆ ಸುತ್ತುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬಳ್ಳಾರಿಯ ಗೋಡೆಹಾಳ ಗ್ರಾಮದಲ್ಲಿ ನಡೆದಿದೆ.

ಗೋಪಾಲ ರೆಡ್ಡಿ ಮಗಳನ್ನು ಕೊಂದ ತಂದೆ, ಕವಿತಾ(23) ಮೃತಪಟ್ಟ ಮಗಳು. ಈಕೆ ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣ ಆಕೆಯ ಮನೆಯವರು ಆಕೆಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದರೂ ಕವಿತಾ ಮಾತ್ರ ತನ್ನ ಊರಿಗೆ ಬಂದಾಗ ಲವರ್ ಜೊತೆ ಸುತ್ತುತ್ತಿದ್ದಾಳಂತೆ. ಮನೆಯವರು ಎಷ್ಟೇ ಬುದ್ಧಿ ಹೇಳಿದರೂ ಆಕೆ ಕೇಳದಿದ್ದಾಗ ತಂದೆಯೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

 

ಈ ಬಗ್ಗೆ ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂದೆಯನ್ನು ವಶಕಕ್ ಎಪಡೆದ ಪೊಲೀಸರು ತನಿಖೇ ನಡೆಸುತ್ತಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :