ಹುಡುಗಿಯರ ಕಣ್ಣಿಗೆ ಕುತ್ತು ತಂದ ಸೀತಾಫಲ ಹಣ್ಣಿನ ಬೀಜ

ಕೊಪ್ಪಳ| pavithra| Last Modified ಬುಧವಾರ, 10 ಅಕ್ಟೋಬರ್ 2018 (14:17 IST)
: ಸೌಂದರ್ಯಕ್ಕೆ ಮಾರು ಹೋಗಿ
ಹುಡುಗಿಯರು ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇದೀಗ


ಹಣವಾಳ ಗ್ರಾಮದ ಅನಿತಾ, ಹಾಗೂ ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಕಣ್ಣಿಗೆ ಕುತ್ತು ತಂದುಕೊಂಡ ಹುಡುಗಿಯರು. ಎರಡು ಪ್ರತ್ಯೀಕ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಅನಿತಾ ಹಾಗೂ ಚಾತುರ್ಯನ ಅಮ್ಮಂದಿರು ನಮ್ಮ ಮಕ್ಕಳ ಕೂದಲು ಕಪ್ಪಾಗಿ ಆಗುತ್ತವೆ ಅಲ್ಲದೇ ತಲೆಯಲ್ಲಿ ಹೇನಿನ ಸಮಸ್ಯೆ ಇರಲ್ಲ ಎಂದು ಸೀತಾಫಲ ಹಣ್ಣಿನ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಅದನ್ನು ಪೇಸ್ಟ್ ಮಾಡಿ ರಾತ್ರಿ ತಲೆಗೆ ಹಚ್ಚಿದ್ದಾರೆ. ಆದರೆ ಆ ಬೀಜದ ವಿಷಭರಿತ ರಾಸಾಯನಿಕವು ಕಣ್ಣಿನ ಒಳಗೆ ಹೋಗಿ ಕಣ್ಣುಗಳು ಮಂಜು ಮಂಜಾಗಿ ಕಂಡಿವೆ.


ಇದರಿಂದ ಆತಂಕಗೊಂಡ ಪೋಷಕರು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಿದ ವೈದ್ಯರು ಕಣ್ಣಿನ ದೋಷದಿಂದ ಇಬ್ಬರನ್ನು ಪಾರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :