ರೇಣುಕಾಚಾರ್ಯ ಹೇಳಿಕೆಗೆ ಕಿಡಿ ಕಾರಿದ ಎಚ್.ವಿಶ್ವನಾಥ್

ಮಡಿಕೇರಿ| pavithra| Last Modified ಗುರುವಾರ, 26 ನವೆಂಬರ್ 2020 (12:47 IST)
ಮಡಿಕೇರಿ : 105 ಶಾಸಕರು ಇದ್ದಿದ್ದರಿಂದ ರಚನೆಯಾಗಿದೆ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಇದ್ದಿದ್ದರಿಂದ ಸರ್ಕಾರ ರಚನೆಯಾಗಿದೆ. ಯಾರೋ ಕೆಲವರಿಂದ ಸರ್ಕಾರ ರಚನೆ ಆಗಿಲ್ಲ. ವಿನಾಕಾರಣ ಗೊಂದಲ ಮೂಡಿಸೋದು ಬೇಡ ಎಂದು ಹೇಳಿದ್ದಾರೆ.

ಹಾಗೇ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನಮಗೆ ಆತುರ ಇಲ್ಲ. ಅನ್ಯಾಯ ಆಗದಂತೆ ಅವಕಾಶ ಕೊಡಬೇಕು. ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :