ರಾಜ್ಯಕ್ಕೆ ಮುಂಗಾರು ಪ್ರವೇಶ: ನಾಳೆಯಿಂದ ಭಾರೀ ಮಳೆ ನಿರೀಕ್ಷೆ

ಬೆಂಗಳೂರು| Krishnaveni K| Last Modified ಶನಿವಾರ, 5 ಜೂನ್ 2021 (09:25 IST)
ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯಾಗುತ್ತಿದೆ.
 > ನಾಳೆಯಿಂದ ಮಳೆ ತೀವ್ರತೆ ಹೆಚ್ಚಾಗಲಿದ್ದು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ಕೆಲವೆಡೆ ಮನೆಗೆ ನೀರು ನುಗ್ಗಿದೆ.>   ವಾಡಿಕೆಯಂತೆ ಜೂನ್ 1 ರಂದು ರಾಜ್ಯಕ್ಕೆ ಬರಬೇಕಿದ್ದ ಮುಂಗಾರು ನಾಲ್ಕು ದಿನ ತಡವಾಗಿ ಪ್ರವೇಶ ಮಾಡಿದೆ. ಕರಾವಳಿಯಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :