ಕೊವಿಡ್ ಲಸಿಕೆ ಹಂಚಿಕೆ ಬಗ್ಗೆ ಆರೋಗ್ಯ ಸಚಿವರಿಂದ ಮಾಹಿತಿ

ಬೆಂಗಳೂರು| pavithra| Last Modified ಮಂಗಳವಾರ, 24 ನವೆಂಬರ್ 2020 (11:55 IST)
ಬೆಂಗಳೂರು : ಕೊವಿಡ್ ಲಸಿಕೆ ಹಂಚಿಕೆ ಬಗ್ಗೆ ಆರೋಗ್ಯ ಸಚಿವ ಡಾ.ಸುದಾಕರ್ ಮಾಹಿತಿ ನೀಡಿದ್ದಾರೆ.

ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 29,451 ಲಸಿಕೆ ವಿತರಣಾ ಕೇಂದ್ರವನ್ನು  ಕೇಂದ್ರ ಸರ್ಕಾರದ ಸೂಚನೆಯಂತೆ ಸಿದ್ಧತೆ ಮಾಡಲಾಗಿದೆ. ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಹಾಗೇ  ಲಸಿಕೆ ವಿತರಣೆಗೆ ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  10,008 ವ್ಯಾಕ್ಸಿನೇಟರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  2,855 ಕೋಲ್ಡ್ ಚೇನ್ ಕೇಂದ್ರ ಲಭ್ಯವಿದೆ. ಹೊಸದಾಗಿ ಬೆಂಗಳೂರು, ಶಿವಮೊಗ್ಗ , ಬಳ್ಳಾರಿಯಲ್ಲಿ ಲಸಿಕೆ ಸಂಗ್ರಹ ಕೇಂದ್ರ ಆರಂಭವಾಗಿದೆ.  ಕೇಂದ್ರದಿಂದ ಡೀಪ್ ಫ್ರಿಜರ್  ಕೂಡ ಮಂಜೂರು  ಆಗಿದೆ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :