Widgets Magazine

ಕೆಪಿಸಿಸಿ ಕಾರ್ಯಾಧ್ಯಕ್ಷರ ಸಹೋದರ ಸಾವು: ಕಾರಣ ಏನು?

ಬೀದರ್| Jagadeesh| Last Modified ಸೋಮವಾರ, 29 ಏಪ್ರಿಲ್ 2019 (11:14 IST)
ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಮಾಜಿ ಡಾ.ವಿಜಯಕುಮಾರ ಖಂಡ್ರೆ ಹೃದಯಘಾತದಿಂದ ನಿಧನರಾಗಿದ್ದಾರೆ.

ಹೈದ್ರಾಬಾದ್ ನ ಖಾಸಗಿ ಸನ್ ಶೈನ್   ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಡಾ.ವಿಜಯಕುಮಾರ ಖಂಡ್ರೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಸಹೋದರ. ಕಳೆದ 1989 ರಲ್ಲಿ ಪಕ್ಷೇತರ ಶಾಸಕರಾಗಿದ್ದರು. ನಂತರ 1994ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಜ್ಯ ಸಹಕಾರ ಸಚಿವ ಬಂಡೆಪ್ಪಾ ಕಾಶಂಪೂರ್, ಗಣಿ ಮತ್ತು ಭೂ ಇಲಾಖೆ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ಸೇರಿದಂತೆ ಹಲವು ಸಚಿವರು, ಶಾಸಕರು ಸಂತಾಪ ಸೂಚಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :