3 ದಿನಕ್ಕೆ ಅಧಿವೇಶನ ಸೀಮಿತ; ಸಿಎಂ ಹೀಗೆ ಆಲೋಚಿಸುತ್ತಿರುವುದಕ್ಕೆ ಕಾರಣವೇನು?

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (11:29 IST)
ಬೆಂಗಳೂರು : ಕೊರೊನಾ ಭೀತಿ ನಡುವೆ ಇಂದು ವಿಧಾನ ಸಭೆ ಅಧಿವೇಶನ ನಡೆಯುತ್ತಿದ್ದು, ಹಲವು ಶಾಸಕರು ಕೊರೊನಾ ಆತಂಕದಿಂದ ಅಧಿವೇಶನಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿವೇಶನಕ್ಕೆ ಆಗಮಿಸಿದ್ದಾರೆ. ಆದರೆ ಸುಮಾರು 15ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ಪಾಸಿಟಿವ್ ಇದ್ದು,  ಸುಮಾರು 40ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ಆತಂಕ ಶುರುವಾಗಿದೆ.
ಇದುವರೆಗೆ ಸುಮಾರು 60 ಶಾಸಕರಷ್ಟೇ ಅಧಿವೇಶನಕ್ಕೆ  ಆಗಮಿಸಿದ್ದು, ಈ ಹಿನ್ನಲೆಯಲ್ಲಿ  3 ದಿನಕ್ಕೆ ಅಧಿವೇಶನ ಸೀಮಿತಕ್ಕೆ ಸಿಎಂ ಆಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  ಇದರಲ್ಲಿ ಇನ್ನಷ್ಟು ಓದಿ :