ಅನ್ ಲಾಕ್ ಬೆನ್ನಲ್ಲೇ ಊರಿನಿಂದ ಬೆಂಗಳೂರಿಗೆ ಮರಳುತ್ತಿರುವ ವಲಸಿಗರು

ಬೆಂಗಳೂರು| Krishnaveni K| Last Modified ಶನಿವಾರ, 12 ಜೂನ್ 2021 (09:14 IST)
ಬೆಂಗಳೂರು: ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ತಮ್ಮ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹೋಗಿದ್ದವರೆಲ್ಲಾ ಈಗ ಅನ್ ಲಾಕ್ ಸುದ್ದಿ ಕೇಳಿ ಬೆಂಗಳೂರಿನತ್ತ ಮರಳುತ್ತಿದ್ದಾರೆ.
 > ಸೋಮವಾರದಿಂದ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದ್ದು, ಊರು ಸೇರಿದ್ದ ಕಾರ್ಮಿಕರು, ಉದ್ಯೋಗದಾತರು ಈಗ ನಗರಕ್ಕೆ ಮರಳುತ್ತಿದ್ದಾರೆ.>   ರಾಜ್ಯ ಸರ್ಕಾರಕ್ಕೂ ಇದೇ ಆತಂಕವಿತ್ತು. ಇದೇ ಕಾರಣಕ್ಕೆ ಶೇ.5 ರಷ್ಟು ಪಾಸಿಟಿವಿಟಿ ದರ ಬರುವವರೆಗೂ ಅನ್ ಲಾಕ್ ಮಾಡಲ್ಲ ಎಂದಿತ್ತು. ಈ ರೀತಿ ವಲಸೆ ಬಂದ ಜನರಿಂದಲೇ ಮತ್ತೆ ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಎಂಬ ಆತಂಕವಿದೆ. ಹೀಗಾಗಿ ಸದ್ಯಕ್ಕೆ ಹೊಸ ನಿಯಮವನ್ನು ಒಂದು ವಾರದ ಮಟ್ಟಿಗೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :