ಐರಾವತ ಬಸ್ ಅಡ್ಡಗಡ್ಡಿ 30 ಲಕ್ಷ ರೂ. ದರೋಡೆ ಮಾಡಿದ ದುಷ್ಕರ್ಮಿಗಳು

guna| Last Modified ಶುಕ್ರವಾರ, 25 ಏಪ್ರಿಲ್ 2014 (11:58 IST)
ರಾಮನಗರ: ನಿನ್ನೆ ಮಧ್ಯರಾತ್ರಿ ರಾಮನಗರದ ಬಳಿ ಐರಾವತ ಬಸ್ ಅಡ್ಡಗಡ್ಡಿ 30 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಕಾಲಿಕಟ್‌ಗೆ ಚಿನ್ನಾಭರಣ ತರುವುದಕ್ಕೆ
ಸಾದಿಕ್ ಪಾಷಾ ಮತ್ತು ಅಲೀಂ ಎಂಬಿಬ್ಬರು 30 ಲಕ್ಷ ರೂ. ತೆಗೆದುಕೊಂಡು ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬಸ್ಸನ್ನು ತಡೆದು ಒಳಕ್ಕೆ ಪ್ರವೇಶಿಸಿ ತಾವು ಪೊಲೀಸರು ಎಂದು ಹೇಳಿ ಇವರಿಬ್ಬರಿಂದ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಸಾದಿಕ್ ಪಾಷಾ ಮತ್ತು ಅಲೀಂ ಇಬ್ಬರೂ ಚಿನ್ನಾಭರಣ ಅಂಗಡಿಯೊಂದಕ್ಕೆ ಕಾಲಿಕಟ್‌ನಲ್ಲಿ
ಚಿನ್ನವನ್ನು ಖರೀದಿಸಲು ತೆರಳುತ್ತಿದ್ದಾಗ ಈ ದುಷ್ಕೃತ್ಯವೆಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :