Widgets Magazine

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿರುದ್ಧ ಸಿಡಿದೆದ್ದ ಇತರೆ ಸಂಘಟನೆಗಳು

ಬೆಂಗಳೂರು| pavithra| Last Modified ಭಾನುವಾರ, 22 ನವೆಂಬರ್ 2020 (10:29 IST)
ಬೆಂಗಳೂರು : ಇತರೆ ಸಂಘಟನೆಗಳಿಗೆ ಅನುದಾನ ನೀಡದ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿರುದ್ಧ ಇತರ ಸಂಘಟನೆಗಳು ಆರೋಪ ಮಾಡುತ್ತಿದ್ದಾರೆ.

ಪ್ರಸಕ್ತ ವರ್ಷ ಕನ್ನಡ ಸಂಘಟನೆಗಳಿಗೆ ಅನುದಾನ ನೀಡಿಲ್ಲ.. ಕೊವಿಡ್ 19 ಕಾರಣದಿಂದ ಅನುದಾನ ವಿತರಿಸಲಿಲ್ಲ. ಆದರೆ ಕರ್ನಾಟಕ ನೌಕರರ ಸಂಘಕ್ಕೆ 10 ಲಕ್ಷ ರೂ.ಅನುದಾನ ನೀಡಲಾಗಿದೆ. ಕೇವಲ ನೌಕರರ ಸಂಘಕ್ಕೆ ಮಾತ್ರ ಈ ಬಾರಿ ಅನುದಾನ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುದಾನ ವಿತರಿಸಲಾಗುತ್ತಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಾಟಾಳ್ ನಾಗರಾಜ್  ಮನವಿ ಮಾಡಿದ ಕಾರಣ ವಾಟಾಳ್ ನಾಗರಾಜ್  ಮನವಿ ಮೇರೆಗೆ ಅವರು ಗೌರವಾಧ್ಯಕ್ಷರಾಗಿರುವ ಸಮಿತಿಗೆ ಅನುದಾನ ಬಿಡುಗಡೆ ಮಾಢಲಾಗಿತ್ತು. ಆದರೆ ಉಳಿದ ಸಂಘಟನೆಗಳಿಗೆ ಅನುದಾನ ವಿತರಣೆ ಮಾಡದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಇತರ ಸಂಘಟನೆಗಳು ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :