ನ್ಯಾಯ ಕೇಳಿ ಬಂದ ಯುವತಿಗೆ ನನ್ನ ಜೊತೆ ಅಡ್ಜೆಸ್ಟ್ ಮಾಡ್ಕೋ ಎಂದ ಪೊಲೀಸ್ ಪೇದೆ

ಬೆಂಗಳೂರು| pavithra| Last Modified ಬುಧವಾರ, 8 ಮೇ 2019 (12:25 IST)
ಬೆಂಗಳೂರು : ಪ್ರಿಯಕರ ಮಾಡಿದ್ದಕ್ಕೆ ಕೊಡಿಸಿ ಎಂದು ಬಂದ ಯುವತಿಗೆ ಪೊಲೀಸ್ ಪೇದೆಯೊಬ್ಬ ನನ್ನ ಜೊತೆ ಅಡ್ಜೆಸ್ಟ್ ಮಾಡಿಕೊಂಡ್ರೆ ನ್ಯಾಯ ಕೊಡಿಸುವೆ ಎಂದ ಪ್ರಕರಣವೊಂದು ಬೆಳಕಿಗೆ ಬಂದಿದೆ.
> >

ವಿಜಯ್ ರಾಥೋಡ್ ಎಂಬ ಪೊಲೀಸ್ ಪೇದೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಗೆ ಯುವತಿಯೊಬ್ಬಳು  ತನ್ನ ಪ್ರಿಯಕರ ಮೋಸ ಮಾಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ವಿಜಯ್ ನಿನಗೆ ಸಹಾಯ ಮಾಡುತ್ತೇನೆ. ಆದರೆ ನನ್ನ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದಾನಂತೆ.
 

ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆ ಪ್ರಿಯಕರನ ವಿರುದ್ಧ ನೀಡಿದ್ದ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :