ಸರ್ಕಾರದ ವಿರುದ್ಧ ಪ್ರಿಯಾಂಕ ಖರ್ಗೆ ಕಿಡಿ

ಬೆಂಗಳೂರು| pavithra| Last Modified ಮಂಗಳವಾರ, 4 ಮೇ 2021 (11:42 IST)
ಬೆಂಗಳೂರು : ನಮಗೆ ಆಕ್ಸಿಜನ್  ಇಲ್ಲದಿದ್ದರೂ ಮಹಾರಾಷ್ಟ್ರಕ್ಕೆ ಕಳಿಸ್ತಿದ್ದಾರೆ ಎಂದು  ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರವನ್ನು ಬರೆದಿದ್ದೆ. ಈವರೆಗೂ ಸಭೆ ನಡೆಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಆಕ್ಸಿಜನ್ ಕೊರತೆ, ಬೆಡ್ ಸಮಸ್ಯೆಯ ಬಗ್ಗೆಯೂ ಪತ್ರ ಬರೆದಿದ್ದೆ. ಸರ್ಕಾರದ ಪತ್ರ ಬರೆದರೆ ರಾಜಕೀಯ ಮಾಡಬೇಡಿ ಅಂತಾರೆ. ಜನರ ಪರವಾಗಿ ಪ್ರಶ್ನೆ ಕೇಳಿದರೂ ರಾಜಕೀಯ ಅಂತಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :