ಬಿಜೆಪಿ ಪರ ಸ್ಯಾಂಡಲ್ ವುಡ್ ನಟಿ ರಾಗಿಣಿ ಪ್ರಚಾರ; ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು| pavithra| Last Modified ಗುರುವಾರ, 10 ಸೆಪ್ಟಂಬರ್ 2020 (12:56 IST)
ಬೆಂಗಳೂರು : ಬಿಜೆಪಿ ಪರ ಸ್ಯಾಂಡಲ್ ವುಡ್ ನಟಿ ರಾಗಿಣಿ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ರಾಗಿಣಿ ಸಿಲುಕಿಹಾಕಿಕೊಂಡಿದ್ದರಿಂದ ಇದೀಗ ಪ್ರತಿಪಕ್ಷದವರು ರಾಗಿಣಿ ಬಿಜೆಪಿ ಸದಸ್ಯ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ನಟಿ ಅಂತ ರಾಗಿಣೆ ಪ್ರಚಾರಕ್ಕೆ ಕರೆತಂದಿದ್ವಿ. ಡ್ರಗ್ಸ್ ಹುಡುಗಿ ಅಂತ ಕರೆ ತಂದಿರಲಿಲ್ಲ. ರಾಗಿಣಿ ಎಲ್ಲರ ಜೊತೆ ಫೋಟೊ ತೆಗೆಸಿರಬಹುದು. ಡಿಕೆಶಿ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ನನ್ನ ಜೊತೆಗೂ ಫೋಟೊ ತೆಗೆಸಿರಬಹುದು ಎಂದು ಆ ಮೂಲಕ ರಾಗಿಣಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :