Widgets Magazine

ಸಿದ್ದರಾಮಯ್ಯಗೆ ಹೊಸ ತಿರುಗೇಟು ಕೊಡ್ತಿರೋ ಡಿ.ಕೆ.ಶಿವಕುಮಾರ್

ನವದೆಹಲಿ| Jagadeesh| Last Modified ಸೋಮವಾರ, 27 ಜನವರಿ 2020 (14:48 IST)
ಕಾಂಗ್ರೆಸ್ ಹೈಕಮಾಂಡ್ ಗೆ ಭೇಟಿ ಮಾಡಿ ಸಿದ್ದರಾಮಯ್ಯ ರಾಜ್ಯಕ್ಕೆ ವಾಪಸ್ ಬರುತ್ತಿದ್ದಂತೆ ಇದೀಗ ಹೈಕಮಾಂಡ್ ಜೊತೆ ಮಾತನಾಡೋಕೆ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿದ್ದಾರಂತೆ.

ಹೀಗಂತ ಸುದ್ದಿಗಳು ಹರಿದಾಡ್ತಿರೋದು ನಿಜವೇ ಆದಲ್ಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಸೋನಿಯಾ ಗಾಂಧಿಯವರಿಗೆ ನೇರವಾದ ಚರ್ಚೆಯಲ್ಲಿ ಕೇಳಲಿರೋ ಡಿ.ಕೆ.ಶಿವಕುಮಾರ್ ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡೋಕೆ ಹೊಸ ಪ್ಲ್ಯಾನ್ ಸಿದ್ಧಪಡಿಸಿಕೊಂಡಂತಾಗಿದೆ.


ಇದರಲ್ಲಿ ಇನ್ನಷ್ಟು ಓದಿ :