ಡಿಕೆ ಶಿವಕುಮಾರ್ ರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ ಶ್ರೀರಾಮುಲು

ಬೆಂಗಳೂರು| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (13:43 IST)
ಬೆಂಗಳೂರು : ಡಿಕೆಶಿವಕುಮಾರ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದ ಹಿನ್ನಲೆಯಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿಕೆ ನೀಡಿದ ಸಚಿವ ಶ್ರೀರಾಮುಲು ಇದೀಗ ಡಿಕೆಶಿ ಕ್ಷಮೆ ಯಾಚಿಸಿದ್ದಾರೆ.
ನಿನ್ನೆ ಇಡಿ ವಿಚಾರಣೆಗೆ ಹಾಜರಾಗುತ್ತಿರುವ ಡಿಕೆಶಿವಕುಮಾರ್ ಭಾವುಕರಾಗಿ, ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ ಎಂದು ಕಣ್ಣೀರು ಹಾಕಿದ್ದರು.


ಈ ಹಿನ್ನಲೆಯಲ್ಲಿ ಮನನೊಂದ ಶ್ರೀರಾಮುಲು ಇದೀಗ ಡಿಕೆಶಿ ಕ್ಷಮೆ ಯಾಚಿಸಿದ್ದಾರೆ. ನನ್ನ ಮಾತಿನಿಂದ ನೋವಾಗಿದ್ದರೆ ಡಿಕೆಶಿ ಅವರಿಗೆ ಬಹಿರಂಗವಾಗಿ ಕ್ಷಮೆಯಾಗಿಸುತ್ತೇನೆ. ಅವರು ಕಣ್ಣೀರು ಹಾಕಬೇಕು ಅನ್ನೋ ಉದ್ದೇಶದಿಂದ ನಾನು ಮಾತನಾಡಿಲ್ಲ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವೇ ಹೊರತು ವೈಯಕ್ತಿಕ ಅಲ್ಲ, ಇವತ್ತು ಅವ್ರು ಕಷ್ಟದಲ್ಲಿದ್ದಾರೆ, ಈ ಸಂದರ್ಭದಲ್ಲಿ ಮಾತಾಡಿದ್ರೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ನೋವಾಗಬಹುದು ಎಂದು ಹೇಳಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಕೆಲವು ಸಂದರ್ಭದಲ್ಲಿ ತಪ್ಪಾಗಿ ಮಾತನಾಡಿರಬಹುದು, ಶ್ರೀರಾಮುಲು ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :