ಇಂದು ರಾಜ್ಯ ಬಜೆಟ್ ಮಂಡನೆ; ಕೃಷಿಗೆ ಬಂಪರ್ ಆಫರ್ ನೀಡಿದ ಸಿಎಂ

ಬೆಂಗಳೂರು| pavithra| Last Modified ಗುರುವಾರ, 5 ಮಾರ್ಚ್ 2020 (11:55 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ ಕೃಷಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.


ಕೇಂದ್ರ ಸರ್ಕಾರ ಕೃಷಿಗೆ ಶೇ. 9.5 ರಷ್ಟು ಅನುದಾನ ಮೀಸಲಿಟ್ಟಿದೆ. ಅದರಂತೆ ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಶೇ. 9.5 ರಷ್ಟು ಅನುದಾನ ಮೀಸಲಿಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 2,600 ಕೋಟಿ ಮೀಸಲಿಡಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 10 ಸಾವಿರ ರೂ. ವಾರ್ಷಿಕ ನೆರವು ನೀಡಲಾಗುವುದು. ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೇಡಿಟ್ ಕಾರ್ಡ್ ವಿತರಣೆ, ರೈತರು ಅಧಿಕ ಬಡ್ಡಿ ದರದಿಂದ ತಪ್ಪಿಸಿಕೊಳ್ಳಲು ಹೊಸ ಕಾರ್ಯಕ್ರಮ ಜಾರಿಗೆ ತರಲಾಗುವುದು.


ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭಿಸಲಾಗುವುದು . ಇದರಿಂದ ಮಣ್ಣು, ನೀರು ಪರೋಕ್ಷೆಗೆ ಇದು ಅನುಕೂಲವಾಗುವುದು. ರೈತರಿಗೆ ಮನೆಬಾಗಿಲಿಗೆ ಕೀಟನಾಶಕ ಮತರಣೆ ಮಾಡಲಾಗುವುದು. ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ ಮೀಸಲಿಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರ ಸಂಭಂದಿಸಿ ಹೊಸ ನೀತಿ ಜಾರಿಗೆ ತರಲಾಗುವುದು.ಇದರಲ್ಲಿ ಇನ್ನಷ್ಟು ಓದಿ :