ವಿಧಾನಸೌಧಕ್ಕೆ ಇರುವ ಭದ್ರತೆ ಕೆಆರ್ ಎಸ್ ಡ್ಯಾಂಗಿಲ್ಲ: ಸುಮಲತಾ ಆಕ್ರೋಶ

bangalore| geethanjali| Last Modified ಮಂಗಳವಾರ, 13 ಜುಲೈ 2021 (20:16 IST)
ವಿಧಾನಸೌದಕ್ಕೆ ಇರೋ ಭದ್ರತೆ ಕೆಆರ್ ಎಸ್ ಡ್ಯಾಂಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗುಡುಗಿದ್ದಾರೆ.
ಮಂಡ್ಯದಲ್ಲಿ ಕೆಆರ್ ಎಸ್ ಡ್ಯಾಂಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಡ್ಯಾಂ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಅಂತ ಅಧಿಕಾರಿಗಳು ಹೇಳುತ್ತಾರೆ. 2018ನಿಂದಲೇ ಗಣಿಗಾರಿಕೆ ನಡೆಯುತ್ತಿಲ್ಲ ಅಂತ ಸುಳ್ಳು ಮಾಹಿತಿ ಕೊಡುತ್ತಾರೆ ಎಂದರು.
ಗಣಿಗಾರಿಕೆ ವೇಳೆ ಸ್ಫೋಟ ಮಾಡಿದರೆ ಅದರಿಂದ ಕೆಆರ್ ಎಸ್ ಜಲಾಶಯಕ್ಕೆ ಹಾನಿ ಅಥವಾ ಅಪಾಯ ಇಲ್ಲ ಅಂತ ನೀವು ಪ್ರಮಾಣ ಪತ್ರ ಕೊಡುತ್ತೀರಾ ಅಂದರೆ ಇಲ್ಲ ಅಂತಾರೆ. ಎಲ್ಲರೂ ಬೇಜಾವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಮಹಾರಾಜರು ಕಟ್ಟಿದ ಜೀವನಾಡಿ ಕೆಆರ್ ಎಸ್ ಸ್ವಲ್ಪ ಹೆಚ್ಚು ಕಡಿಮೆ ಆದರೂ ನಾವ್ಯಾರೂ ಇರಲ್ಲ ಎಂದು ಸುಮಲತಾ ಆತಂಕ ವ್ಯಕ್ತಪಡಿಸಿದರು.
ಕೆಆರ್ ಎಸ್ ಡ್ಯಾಂಗೆ ಹಾನಿಯಾದರೆ ಬೆಂಗಳೂರಿನವರಿಗೆ ಕುಡಿಯುವ ನೀರು ಕೂಡ ಸಿಗಲ್ಲ. ರೈತರಂತೂ ಸತ್ತೆ ಹೊಗ್ತಾರೆ. ಹೆಚ್ಚಿನ ಭದ್ರತೆ ಒದಗಿಸಬೇಕಾದಂತ ಜಾಗದಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಯುವಕರು ಪಾರ್ಟಿ ಮಾಡುತ್ತಾರೆ. ನಾಳೆ ದಿನ ಯಾರಾದ್ರೂ ಬಂದು ಅನಾಹುತ ಮಾಡಿದರೆ ಏನು ಮಾಡ್ತಾರೆ ಎಂದು ಅವರು ಪ್ರಶ್ನಿಸಿದರು.


ಇದರಲ್ಲಿ ಇನ್ನಷ್ಟು ಓದಿ :