Widgets Magazine

ಜನವರಿ ಅಂತ್ಯದವರೆಗೂ ಸಚಿವ ಸಂಪುಟ ವಿಸ್ತರಣೆ ಅನುಮಾನ

ಬೆಂಗಳೂರು| pavithra| Last Modified ಮಂಗಳವಾರ, 14 ಜನವರಿ 2020 (10:32 IST)
ಬೆಂಗಳೂರು : ಸಿಎಂ ಟೂರ್ ಪ್ಲ್ಯಾನ್ ನೋಡಿದ್ರೆ ಜನವರಿ ಅಂತ್ಯದವರೆಗೂ ಸಚಿವ ಸಂಪುಟ ವಿಸ್ತರಣೆ ಅನುಮಾನ ಎನ್ನಲಾಗಿದೆ.ಹೌದು. ಇಂದು ಅಮಿತ್ ಶಾ ಭೇಟಿಗೆ ಅವಕಾಶ ಸಿಗದ ಹಿನ್ನಲೆಯಲ್ಲಿ ದೆಹಲಿಗೆ ತೆರಳಬೇಕಾಗಿದ್ದ ಸಿಎಂ ರದ್ದಾಗಿದೆ. ಆದಕಾರಣ  ಇಂದು ಮತ್ತು ನಾಳೆ ಚಿಕ್ಕಮಗಳೂರು, ದಾವಣಗೆರೆ ಹಾಗೂ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಹಾಗೇ ಜನವರಿ 16ರಂದು ಬೆಂಗಳೂರಿನಲ್ಲಿ ಇರಲಿರುವ ಸಿಎಂ, ಜ.16ರಂದು ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆಯೇ? ಎನ್ನಲಾಗಿದೆ.


ಹಾಗೇ ಜ.17 ಮತ್ತು 18ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ  ಹುಬ್ಬಳ್ಳಿಯ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಈ ವೇಳೆ ಅಮಿತ್ ಶಾ ಜೊತೆ ಸಿಎಂ ಚರ್ಚೆ ಸಾಧ್ಯತೆ ಇದೆ ಎನ್ನಲಾಗಿದೆ. ಜ.18ರಂದು ಚರ್ಚಿಸಿ ಜ.19ಕ್ಕೆ ವಿದೇಶಕ್ಕೆ ಪ್ರಯಾಣ ಬೆಳೆಸಿ ಜ.25ಕ್ಕೆ ವಾಪಾಸ್ ಆಗಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :