ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಶಾಸಕ ತನ್ವೀರ್ ಸೇಠ್

ಬೆಂಗಳೂರು| pavithra| Last Modified ಸೋಮವಾರ, 1 ಮಾರ್ಚ್ 2021 (12:46 IST)
ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬುಲಾವ್ ಹಿನ್ನಲೆಯಲ್ಲಿ ಡಿಕೆಶಿಯವರನ್ನು ಭೇಟಿಯಾಗಲು  ಬೆಂಗಳೂರಿಗೆ ಶಾಸಕ ತನ್ವೀರ್ ಸೇಠ್ ದೌಡಾಯಿಸಿದ್ದಾರೆ.
ಆದರೆ ಸದ್ಯ ಡಿಕೆ ಶಿವಕುಮಾರ್ ಕೋಲಾರದಲ್ಲಿರುವ ಹಿನ್ನಲೆಯಲ್ಲಿ  ಇಂದು ಸಂಜೆ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.> > ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಯಾರ ಕೋಟೆ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನನ್ನು ಟಾರ್ಗೆಟ್ ಮಾಡಿದಂತೆ ಅನಿಸುತ್ತಿದೆ. ಇಡೀ ಘಟನೆ ಹೇಗೆ ಗ್ರಹಿಸುತ್ತಾರೋ ನನಗೆ ಗೊತ್ತಿಲ್ಲ. ಒಂದಂತೂ ಸತ್ಯ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :