ಮೆಡಿಕಲ್ಸ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು| Jagadeesh| Last Modified ಶುಕ್ರವಾರ, 28 ಸೆಪ್ಟಂಬರ್ 2018 (14:18 IST)
ಕೇಂದ್ರ ಸರ್ಕಾರವು ಹೊರಡಿಸಿರುವ ಜಿಎಸ್ಆರ್ ಆನ್‌ಲೈನ್ ಔಷಧಿ ಮಾರಾಟ ಮಾಡುವ ಇ-ಫಾರ್ಮಸಿ ನಿಯಮಾವಳಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕೆಲವು ಅಸೋಸಿಯೇಷನ್ ಗಳು ಕರೆ ನೀಡಿರುವ ಫಾರ್ಮಸಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಖಿಲ ಭಾರತ ಮೆಡಿಕಲ್ಸ್ ಬಂದ್ ಗೆ ಕರೆ ನೀಡಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಕೆಲವು ಮೆಡಿಕಲ್ಸ್ ಗಳು ಬಂದ್ ಮಾಡಿಲ್ಲ. ಹೀಗಾಗಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರೋಗಿಗಳ ಹಿತದೃಷ್ಟಿಯಿಂದ ಯಾವ ರೋಗಿಗೆ ತೊಂದರೆ ಆಗಬಾರದು ಎಂದು ಎಲ್ಲ ಮೆಡಿಕಲ್ಸ್ ನವರು ಚರ್ಚಿಸಿ ಎಂದಿನಂತೆ ಕಾರ್ಯನಿರ್ವಹಿಸಲು ನಿರ್ಧಾರಿಸಿ ಔಷಧಿ ಮಳಿಗೆಗಳನ್ನು ಮುಚ್ಚಿಲ್ಲ ಎಂದು ಕೆಲವರು ತಿಳಿಸಿದರು.
ಕಾನೂನು ಹೋರಾಟ ನಡೆಸುವುದಾಗಿ ನೀರ್ಧಾರಿಸಿ ಆನೇಕಲ್ ನ ಎಲ್ಲಾ ಔಷಧಿ ಮಳಿಗೆಗಳು

ತೆರೆದು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.ಇದರಲ್ಲಿ ಇನ್ನಷ್ಟು ಓದಿ :