ಸಿಎಂ ಬಿಎಸ್ ವೈ ವಿರುದ್ಧ ಅಸಮಾಧಾನ ಹೊರಹಾಕಿದ ಬಿಜೆಪಿ ಸಂಸದ

ಮೈಸೂರು| pavithra| Last Modified ಬುಧವಾರ, 25 ನವೆಂಬರ್ 2020 (12:27 IST)
ಮೈಸೂರು : ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನೇ ಮಂತ್ರಿ ಪಟ್ಟ ಬೇಡ ಎಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸೋಕೆ ಬೇಡ ಎಂದಿದ್ದೆ. ಇನ್ನು ಮಂತ್ರಿ ಪಟ್ಟ ಯಾಕೆ ಬೇಕು ನನಗೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಹಾಗೇ ಹಳೇ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರ ಹರ್ಷವರ್ಧನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಶಾಸಕ ಹರ್ಷವರ್ಧನ್ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಸಿಎಂ ಬಿಎಸ್ ವೈ ಹಳೇ ಮೈಸೂರು ಭಾಗದವರೇ. ಸಚಿವರಾದ ಕೆ.ಎಸ್.ಈಶ್ವರಪ್ಪ, ಎಸ್.ಟಿ.ಸೋಮಶೇಖರ್, ನಾರಾಯಣಗೌಡ ಕೂಡ ಹಳೇ ಮೈಸೂರು ಭಾಗದವರೇ. ಅವರು ಇನ್ನೆಷ್ಟು ಜನರನ್ನು ಗುಡ್ಡೆ ಹಾಕಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರವಿತ್ತು. ಅವರು ಸಿಎಂ ಆದ ಬಳಿಕ ಅವರಿಗೆ ಅಂಥ ದರ್ದು ಇಲ್ಲ.  ಈಗ ಸಿಎಂ ಬಿಎಸ್ ಯಡಿಯೂರಪ್ಪ ಆರಾಮಾಗಿ ಇದ್ದಾರೆ ಎಂದು ಬಹಿರಂಗವಾಗಿ  ಅಸಮಾಧಾನ ಹೊರಹಾಕಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :