ಸಂಕ್ರಾಂತಿಗೆ ಯಾವುದೇ ಹೊಸ ರೂಲ್ಸ್ ಇಲ್ಲ- ಆರೋಗ್ಯ ಸಚಿವ ಡಾ.ಸುಧಾಕರ್

ಬೆಂಗಳೂರು| pavithra| Last Modified ಶುಕ್ರವಾರ, 8 ಜನವರಿ 2021 (11:55 IST)
ಬೆಂಗಳೂರು : ಸಂಕ್ರಾಂತಿಗೆ ಯಾವುದೇ ಹೊಸ ರೂಲ್ಸ್ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ. ಈಗಿರುವ ಕೊರೊನಾ ನಿಯಮ ಪಾಲಿಸಿ. ಜನಜಂಗುಳಿ ಇಲ್ಲದೇ ಸರಳವಾಗಿ ಹಬ್ಬ ಆಚರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಹಾಗೇ ಹಕ್ಕಿ ಜ್ವರದ ಬಗ್ಗೆ ಮಾಹಿತಿ ನೀಡಿದ ಅವರು, ಹಕ್ಕಿ ಜ್ವರದಿಂದ ಕಾಗೆಗಳು ಸತ್ತಿಲ್ಲ. ದ.ಕನ್ನಡ, ಚಿಕ್ಕಬಳ್ಳಾಪುರದಲ್ಲಿ ಕಾಗೆಗಳು ಸತ್ತಿವೆ. ಬೇರೆ ಕಾರಣಗಳಿಂದ ಕಾಗೆಗಳು ಸತ್ತಿವೆ. ಆದ್ರೂ ಕೂಡ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :