Widgets Magazine

ಸಚಿವ ಸ್ಥಾನ ಬೇಕಾದವರು wait ಮಾಡಲಿ

ಬೆಂಗಳೂರು| Jagadeesh| Last Modified ಗುರುವಾರ, 10 ಸೆಪ್ಟಂಬರ್ 2020 (18:41 IST)
ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಾದರೆ ಕಾಯಲೇಬೇಕು.

ಹೀಗಂತ ಖಡಕ್ ಆಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಶಂಕರ್, ಹೆಚ್. ವಿಶ್ವನಾಥ್‍ಗೆ ನೀಡುವ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ನಂಗೇನೂ ಗೊತ್ತಿಲ್ಲ.

ಕೋರ್ಟ್, ಕಚೇರಿ ಅಂತ ಅಲೆದು 14 ತಿಂಗಳ ಕಾಯ್ದ ಬಳಿಕ ನಾವು ಸಚಿವರಾಗಿದ್ದೇವೆ. ಸಚಿವ ಸ್ಥಾನ ಬೇಕಾದವರು ಕಾಯಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಹೈಕಮಾಂಡ್, ಸಿಎಂ ಬಿ.ಎಸ್.ಯಡಿಯೂರಪ್ಪನವರು ಈ ಬಗ್ಗೆ ಫೈನಲ್ ನಿರ್ಧಾರ ಮಾಡ್ತಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :