ರಸ್ತೆ ಸಮಸ್ಯೆ ಬಗ್ಗೆ ಹೇಳಿದ ಗ್ರಾಮಸ್ಥನ ಮೇಲೆ ದರ್ಪ ತೋರಿದ ಸಂಸದ ಉದಾಸಿ

ಹಾವೇರಿ| pavithra| Last Modified ಮಂಗಳವಾರ, 24 ನವೆಂಬರ್ 2020 (11:49 IST)
ಹಾವೇರಿ : ರಸ್ತೆ ಸಮಸ್ಯೆ ಬಗ್ಗೆ ಹೇಳಿದ ಗ್ರಾಮಸ್ಥನ ಮೇಲೆ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ನ.20ರಂದು ಈ ಘಟನೆ ನಡೆದಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಗೆಯ ವೇಳೆ ಕಾಮಗಾರಿಗೆ ಚಾಲನೆ ನೀಡಲು ಶಿವಕುಮಾರ್ ಉದಾಸಿ ಆಗಮಿಸಿದ್ದರು. ಆ ವೇಳೆ ಗ್ರಾಮಸ್ಥನೊಬ್ಬ  ತಮ್ಮ ಗ್ರಾಮದ ರಸ್ತೆ ಸಮಸ್ಯೆ ಬಗ್ಗೆ ಬಿಜೆಪಿ ಮುಖಂಡನ ಬಳಿ ಮಾತನಾಡುತ್ತಿದ್ದ.

ಆಗ ಮಧ್ಯ ಪ್ರವೇಶಿಸಿದ ಸಂಸದ ಶಿವಕುಮಾರ್ ಉದಾಸಿ ಗ್ರಾಮಸ್ಥನ ಮೇಲೆ ದರ್ಪ ತೋರಿ ಎಡಗೈಯಿಂದ ನೂಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :