Widgets Magazine

ಕಾರಿನ ಮೇಲೆ ಮೂತ್ರ ಮಾಡಿದ್ದಕ್ಕೆ ಗದರಿಸಿದ ಸೆಕ್ಯುರಿಟಿ ಗಾರ್ಡ್ ಗೆ ಆಟೋ ಚಾಲಕ ಹೀಗಾ ಮಾಡೋದು?

ಪುಣೆ| pavithra| Last Modified ಶುಕ್ರವಾರ, 20 ನವೆಂಬರ್ 2020 (06:57 IST)
ಪುಣೆ : ಕಂಪೆನಿ ಮಾಲೀಕನ ಕಾರಿನ ಮೇಲೆ ಮೂತ್ರ ಮಾಡಿದ್ದಕ್ಕೆ ಗದರಿಸಿದ ಸೆಕ್ಯುರಿಟಿ ಗಾರ್ಡ್ ಗೆ ಆಟೋ ಚಾಲಕನೊಬ್ಬ ಬೆಂಕಿ ಹಚ್ಚಿದ ಘಟನೆ ಪುಣೆಯ ಭೋಸರಿಯಲ್ಲಿ ನಡೆದಿದೆ.

ಮಹೇಂದ್ರ ಬಾಲು (31) ಆರೋಪಿ ಎಂದು ಗುರುತಿಸಲಾಗಿದೆ. ಈತ ಕಂಪೆನಿಯೊಂದರ ಮಾಲೀಕನ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ಅಲ್ಲಿದ್ದ ಸೆಕ್ಯುರಿಟಿ ಆಟೋ ಚಾಲಕನಿಗೆ ಗದರಿದ್ದಾನೆ. ಇದರಿಂದ ಇಬ್ಬರ ನಡುಗೆ ಗಲಾಟೆ ನಡೆದಿದ್ದು ಕಂಪೆನಿಯ ಸಿಬ್ಬಂದಿಗಳು ಮಧ್ಯೆ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ. ಆದರೆ ಅಲ್ಲಿಂದ ಹೊರಟು ಹೋದ ಚಾಲಕ ಮತ್ತೆ ಸಂಜೆ ವೇಳೆಗೆ ಬಂದು ಸೆಕ್ಯುರಿಟಿ ಗಾರ್ಡ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರ ಪರಿಣಾಮ ಆತ 20ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಆಟೋ ಡ್ರೈವರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :