ಬಚ್ಚೇಗೌಡ ನನ್ನನ್ನು ಸೋಲಿಸಿದರು ಎಂಬ ಎಂಟಿಬಿ ಹೇಳಿಕೆಗೆ ಬಚ್ಚೇಗೌಡರು ಹೇಳಿದ್ದೇನು?

ಹೊಸಕೋಟೆ| pavithra| Last Modified ಭಾನುವಾರ, 9 ಫೆಬ್ರವರಿ 2020 (11:07 IST)
ಹೊಸಕೋಟೆ : ನನ್ನನ್ನು ಸೋಲಿಸಿದರು ಎಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿ.ಎನ್. ಬಚ್ಚೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಬೈಎಲೆಕ್ಷನ್ ವೇಳೆ ನಾನು ಬಂದೇ ಇರಲಿಲ್ಲ. ನಾನು ಯಾರ ಪರವೂ ಪ್ರಚಾರ ಮಾಡಿರಲಿಲ್ಲ. ಪ್ರತ್ಯಕ್ಷ, ಪರೋಕ್ಷವಾಗಿ ನಾನು ಯಾರನ್ನೂ ಬೆಂಬಲಿಸಿಲ್ಲ. ಬೈಎಲೆಕ್ಷನ್ ನಲ್ಲಿ ನಾನು ಯಾರ ಪರವೂ ಪ್ರಚಾರ ಮಾಡಿಲ್ಲ. ಈಗ ನಗರಸಭೆ ಚುನಾವಣೆಗೂ ನಾನು ಪ್ರಚಾರ ಮಾಡಿಲ್ಲ ಎಂದು ಹೇಳಿದ್ದಾರೆ.


ನಾನು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಶರತ್ ನನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಿಲ್ಲ. ಎಂಎಲ್ ಸಿ ಚುನಾವಣೆಯಲ್ಲಿ ಶರತ್ ಯಾರನ್ನೂ ಬೆಂಬಲಿಸುತ್ತಾರೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :