ವಿಚ್ಚೇದನಕ್ಕೆ ಸಹಿ ಹಾಕಲು ಹೇಳಿದ ಪತಿಗೆ ಪತ್ನಿ ಮಾಡಿದ್ದೇನು?

ಕೋಲಾರ| Hanumanthu.P| Last Modified ಮಂಗಳವಾರ, 19 ಡಿಸೆಂಬರ್ 2017 (16:26 IST)
ವರದಕ್ಷಿಣೆ ನೀಡಲಾಗದಿದ್ದರೆ ವಿಚ್ಛೇದನ ಪತ್ರಕ್ಕೆ ಸಹಿಹಾಕಲು ಬೆದರಿಕೆ ಹಾಕಿದ ಪತಿಗೆ ಬುದ್ದಿ ಕಲಿಸಲು ಗೃಹಿಣಿಯೊಬ್ಬರು ಪತಿಬೇಕು ಎಂದು ಪತಿಯ ಮನೆಯ ಮುಂದೆ ಧರಣಿ ಕುಳಿತ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಹೊಳೆಗೆರೆ ಗ್ರಾಮದ ವೇದ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪತಿ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ.
ಒಂದೂವರೆ ವರ್ಷದ ಹಿಂದೆ ಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ್ ಅವರೊಂದಿಗೆ ಮದುವೆ ಗ್ರಾಮಸ್ಥರ ಗುರು-ಹಿರಿಯರ ಸಮ್ಮುಖದಲ್ಲಿಯೇ ಮಾಡಲಾಗಿತ್ತು. ಆದರೆ ಮದುವೆಯಾದ 3 ತಿಂಗಳ ನಂತರ ಪತಿ ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾನೆ. ಈ ಸಂದರ್ಭದಲ್ಲಿ ವೇದ ತವರು ಮನೆ ಸೇರಿದ್ದರು.


ಹಿರಿಯರ ಸಮ್ಮುಖದಲ್ಲಿ ಸಂಧಾನ ಪ್ರಕ್ರಿಯೆ ಮಾಡಿದರೂ ಸಂಸಾರ ಸರಿಯಾಗಿರಲಿಲ್ಲ. ವರದಕ್ಷಿಣೆ ತರಲು ಸಾಧ್ಯವಾಗದೇ ಇದ್ದಲ್ಲಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಪತಿ ಬೇಡಿಕೆಯಿಟ್ಟಿದ್ದ. ಆದ್ದರಿಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ, ಪತಿಯೊಂದಿಗೆ ಸಂಸಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ದೂರು ದಾಖಲಿಸಲಾಗಿದೆ ಎಂದು ಧರಣಿ ನಿರತ ಗೃಹಿಣಿ ಹೇಳಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :