ಡಿಸಿಎಂ ಲಕ್ಷ್ಮಣ್ ಸವದಿಗೆ ಯುವರಾಜ್ ಸ್ವಾಮಿ ಸನ್ಮಾನ ; ಈ ಬಗ್ಗೆ ಡಿಸಿಎಂ ಸವದಿ ಹೇಳಿದ್ದೇನು?

ಬೆಂಗಳೂರು| pavithra| Last Modified ಶನಿವಾರ, 9 ಜನವರಿ 2021 (13:02 IST)
ಬೆಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಯುವರಾಜ್  ಫೋಟೊ ವೈರಲ್ ಆದ ಬೆನ್ನಲೇ ಇದೀಗ ರಾಜಕೀಯ ಮುಖಂಡರ ಜತೆಯಿರುವ ಯುವರಾಜ್ ಫೋಟೋ ವೈರಲ್ ಆಗಿದೆ.

ಅದರಲ್ಲಿ ಬಿಜೆಪಿ ನಾಯಕರಾದ  ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ವಿ.ಸೋಮಣ್ಣ, ಕೆ.ಸಿ.ವೇಣುಗೋಪಾಲ್ ಜೊತೆಗಿನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಯುವರಾಜ್ ಸ್ವಾಮಿ ಸನ್ಮಾನ ಮಾಡಿದ ಫೋಟೊ ವೈರಲ್ ಆಗಿದೆ.

ಈ ವಿಚಾರದ ಬಗ್ಗೆ ಮಾತನಾಡಿದ  ಡಿಸಿಎಂ ಲಕ್ಷ್ಮಣ್ ಸವದಿ, ಈ ಮೊದಲು ಯುವರಾಜ್ ಹಿನ್ನಲೆ ನನಗೆ ಗೊತ್ತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿದ್ದಾಗ ಹಲವರು ಬರುತ್ತಾರೆ. ನನಗ ಸನ್ಮಾನ ಮಾಡಲು ಬಂದಾಗ ತಿರಸ್ಕರಿಸಲು ಆಗಲ್ಲ. ಯುವರಾಜ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :