ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಕೊಡಚಾದ್ರಿ

ಬೆಂಗಳೂರು| pavithra| Last Updated: ಗುರುವಾರ, 4 ಜನವರಿ 2018 (12:58 IST)
ಬೆಂಗಳೂರು : ಕೊಡಚಾದ್ರಿ ಬೆಟ್ಟ ಪ್ರವಾಸಿಗರಿಗೆ ಒಂದು ರಮಣೀಯ ತಾಣವಾಗಿದ್ದು, ಇದು ನೋಡುಗರ ಕಣ್ಣಿಗೂ ಮುದವನ್ನು ನೀಡುತ್ತದೆ. ಕೊಡಚಾದ್ರಿ ಬೆಟ್ಟಗಳ ಸಾಲು ಕರ್ನಾಟಕ ರಾಜ್ಯದ ಜಿಲ್ಲೆಯಲ್ಲಿ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 1343ಮೀ ಎತ್ತರದಲ್ಲಿದೆ. ಕೊಡಚಾದ್ರಿ ಬೆಟ್ಟ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲದೆ
ಇಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವಿರುವುದರಿಂದ ಧಾರ್ಮಿಕರನ್ನು ಕೂಡ ಈ ಆಕರ್ಷಿಸುತ್ತದೆ.
ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಸ್ಥಳದಲ್ಲಿ ಆದಿಗುರು ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಸರ್ವಜ್ಞ ಪೀಠಕ್ಕಿಂತ 2 ಕಿ.ಮೀ. ಮೊದಲು ಮೂಕಾಂಬಿಕೆ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದೆ ಇರುವ ಬೆಟ್ಟವನ್ನು ಇಳಿದರೆ ಚಿತ್ರಮೂಲವೆಂಬ ಸ್ಥಳ ಸಿಗುತ್ತದೆ. ಅದು ಸೌಪರ್ಣಿಕ ನದಿಯ ಉಗಮಸ್ಥಾನ. ಈ ಸ್ಥಳದಲ್ಲಿ ಅನೇಕ ಜಾತಿಯ ಸಸ್ಯಗಳು ಬೆಳೆಯುತ್ತದೆ.


ಇಪ್ಪತ್ತನೇಯ ಶತಮಾನದಲ್ಲಿ ಇಲ್ಲಿ ಸುತ್ತಾಡಿದ ಲೇಖಕ ಹಾಗು ಪರಿಸರ ಪ್ರೇಮಿ ಡಾ. ಶಿವರಾಮ್ ಕಾರಂತರು ಅಲ್ಲಿರುವ ಮೂರು
ಪರ್ವತಗಳನ್ನು ಕಾಲ್ನಡಿಗೆಯಲ್ಲಿ ಏರಿ ಅವುಗಳಲ್ಲಿ ಒಂದಾದ ಕುದುರೆಮುಖ ಶಿಖರವನ್ನು ಅತ್ಯಂತ ದೂರದ ಚಾರಣ, ಕುಮಾರ ಪರ್ವತವನ್ನು ತುಂಬಾ ಕಠಿಣವೆನಿಸುವ ದಾರಿ ಹಾಗು ಕೊಡಚಾದ್ರಿಯನ್ನು ಇವೆಲ್ಲಕ್ಕಿಂತಲೂ ಚಂದದ ತಾಣವೆಂದು ವರ್ಣಿಸಿದ್ದಾರೆ.
ಕ್ರಿ.ಶ. ಏಳನೇ ಶತಮಾನದಲ್ಲಿ ಆದಿಗುರು ಶ್ರೀ ಶಂಕರಾಚಾರ್ಯರು ಕೊಡಚಾದ್ರಿಗೆ ಭೇಟಿ ನೀಡಿ ಅಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಕೊಲ್ಲೂರಿನಲ್ಲಿ ಪ್ರತಿಷ್ಠಾಪನೆ
ಮಾಡಿದರು ಎಂದು ಪುರಾಣ ಹೇಳುತ್ತದೆ. ಆ ದೇವಸ್ಥಾನವು ಕೂಡ ಪುರಾತನವಾದದ್ದು. ಈ ದೇವಸ್ಥಾನದ ಬಳಿ ಇರುವ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವು ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ. ಇದು ಪುರಾತನ ವಿಧಾನಗಳಿಂದ ತಯಾರಾದ ಕಬ್ಬಿಣ ಎಂದು ಸಂಶೋಧನೆಗಳಿಂದ ಪತ್ತೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :