ಆಪ್ಗೆ ಮತ ಹಾಕಬೇಡಿ, ಆಪ್ಗೆ ವೋಟ್ ಹಾಕಿದರೆ ಬಿಜೆಪಿಗೆ ಸಹಾಯವಾಗುತ್ತದೆ ಎಂದು ಕೆಲವು ಮುಸ್ಲಿಂ ಮುಖಂಡರು ಮುಂಬೈನಲ್ಲಿನ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾರೆ. ಮಾಜಿ ಕಾಂಗ್ರೆಸ್ ಶಾಸಕ ಯೂಸುಫ್ ಅಬ್ರಾನಿ ಕನಸಿನ ಕೂಸಾದ- ಸಚ್ ಕಾ ಸಫರ್ ಎಂಬ ಅಭಿಯಾನದ ಉದ್ಘಾಟನೆಯ ವೇಳೆ ಈ ಮಾತು ಕೇಳಿ ಬಂತು.