ಸುಪ್ರತಿಮ್ ದತ್ತಾ ಎಂಬವರ ದೇಹದೊಳಕ್ಕೆ ನುಗ್ಗಿದ್ದ ಕಬ್ಬಿಣದ ಸಲಾಕೆಯನ್ನು ಯಶಸ್ವಿಯಾಗಿ ಆಪರೇಶನ್ ಮೂಲಕ ತೆಗೆದ ಎರಡು ತಿಂಗಳಲ್ಲಿ, ನವದೆಹಲಿಯ ಎಐಐಎಂಎಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದು, ಅಪಘಾತವೊಂದರಲ್ಲಿ ಏಟುಬಿದ್ದು ಒಡೆದು ಹೋಗಿದ್ದ ಹೃದಯವನ್ನು ಸರಿಪಡಿಸಿ ಪವಾಡ ಸೃಷ್ಟಿಸಿದ್ದಾರೆ.22ರ ಹರೆಯದ ಅರುಣ್ ಶರ್ಮಾ ಎಂಬ ಮೆಡಿಕಲ್ ರೆಪ್ರೆಸೆಂಟೇಟಿವ್ ಮೀರತ್ನಲ್ಲಿ ಬೈಕ್ ಅಪಘಾತಕ್ಕೀಡಾದ ಭರ್ತಿ ಎಂಟು ಗಂಟೆಗಳ ಬಳಿಕ ಎಐಐಎಂಎಸ್ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ. ಮೀರತ್ ವೈದ್ಯರಂತೂ ಈತನ ಆಸೆಯನ್ನೇ ಕೈಬಿಟ್ಟಿದ್ದರು.