ಹಲವು ವಿಷಯಗಳಲ್ಲಿ ವಿಶ್ವದಲ್ಲಿ ನಂ.1 ಆಗಿರುವ ಭಾರತ ಈಗ ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿರುವ ಅತಿ ಹೆಚ್ಚು ಜನರಿರುವ ದೇಶ ಎಂಬ ಹೊಸ ನಂ.1 ಪಟ್ಟವನ್ನೂ ಗಿಟ್ಟಿಸಿದೆ. ಬಡವರ್ಗದವರಿರುವ ಭಾರತದಲ್ಲಿ 230 ಮಿಲಿಯನ್ ಮಂದಿ ಅಪೌಷ್ಠಿಕ ಆಹಾರ ಸೇವಿಸುತ್ತಿರುವವರು ಎಂಬುದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ. ಇದರ ಪ್ರಕಾರ ಈ ಅಪೌಷ್ಠಿಕತೆಯಿಂದ ಶೇ.50ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಆಹಾರದ ಬೆಲೆ ಏರಿಕೆಯಿಂದ ಭಾರತದ ಹಳ್ಳಿಗಳಲ್ಲಿ 1.5 ಮಿಲಿಯನ್‌ಗೂ ಹೆಚ್ಚು ಮಂದಿ ಪೌಷ್ಠಿಕ ಆಹಾರವಿಲ್ಲದೆ