ಅವಿನಾಶ್ ಬಿ. ND ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ ಬ್ಲಾಗ್ ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು. ಸರಕಾರದ ಧೋರಣೆ ಬಗ್ಗೆ, ನಿಮ್ಮೂರಿನ ಸಮಸ್ಯೆಗಳ ಬಗ್ಗೆ... ನಿಮಗೇನನಿಸುತ್ತದೋ... ಬರೆದು ಬಿಡಿ... ಅಲ್ಲಲ್ಲ... (ಬ್ಲಾಗಿಗರ ಭಾಷೆಯಲ್ಲೇ ಹೇಳುವುದಾದರೆ) ಕೀಬೋರ್ಡ್ ಕುಟ್ಟಿ ಬಿಡಿ!ಕೆಲವು ಬ್ಲಾಗುಗಳು ಮಾಹಿತಿ ಗುಚ್ಛವಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತೆ ಕೆಲವು ಬ್ಲಾಗುಗಳು