ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ, ಹಾಸ್ಯ ಮತ್ತು ಕಾರ್ಟೂನ್‌ಗಳಿಗಾಗಿಯೇ ಮೀಸಲಾಗಿರುವ ವಿಶಿಷ್ಟವಾದ ಮಾಸಿಕ ಪತ್ರಿಕೆ 'ವಾರೆಕೋರೆ' ಎಂಬ 'ಶುದ್ಧ ತರ‌್ಲೆ ಮಾಸ ಪತ್ರಿಕೆ' ಜನವರಿ 23ರಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.ಈ ಪತ್ರಿಕೆಯಲ್ಲಿ ಪ್ರಕಾಶ್ ಶೆಟ್ಟಿ ಅವರ ಸಹೋದರ, ಮತ್ತೊಬ್ಬ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಹರಿಣಿ, ಜೀವನ್, ಜೇಮ್ಸ್ ವಾಜ್, ಕೆ.ಆರ್.ಸ್ವಾಮಿ, ಶ್ರೀಧರ್, ಸತೀಶ್ ಶೃಂಗೇರಿ, ಗೋಪಾಲ್ ಮುಂತಾದ ಕಾರ್ಟೂನಿಸ್ಟ್‌ಗಳು ತಮ್ಮ ಕೈಚಳಕವನ್ನು ಮೆರೆಯಲಿದ್ದಾರೆ. ಈ ಪತ್ರಿಕೆಯೊಂದಿಗೆ 'ಕಾರ್ಟೂನ್ ಮಾಸ್ಟರ್' ಎಂಬ ವ್ಯಂಗ್ಯ ಚಿತ್ರ ಕಲಿಕಾ ಕೈಪಿಡಿಯು ಉಚಿತವಾಗಿ ದೊರೆಯುತ್ತದೆ.ಕರ್ನಾಟಕದಾದ್ಯಂತ ಸರಣಿ ನಗೆ ಬಾಂಬ್ ಸ್ಫೋಟಗೊಳ್ಳಲಿದೆ, ಕನ್ನಡ ಪತ್ರಿಕೋದ್ಯಮದಲ್ಲೊಂದು 'ತುಂಟರ' ಗಾಳಿ ಎಂಬ ವಿಶಿಷ್ಟ ಹಾಸ್ಯದ ಒಕ್ಕಣೆಗಳೊಂದಿಗೆ ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆಯೂ ವಿಶಿಷ್ಟವಾಗಿತ್ತು.15 ಹರೆಯದಲ್ಲೇ ಕಾರ್ಟೂನ್ ಮಾಡುವುದನ್ನು ಆರಂಭಿಸಿದ್ದ ಪ್ರಕಾಶ್ ಶೆಟ್ಟಿ, ದಿ ವೀಕ್, ತುಷಾರ, ಸಂತೋಷ, ಮುಂಗಾರು ಮತ್ತಿತರ ಪತ್ರಿಕೆಗಳಲ್ಲಿ ತಮ್ಮ ವಿಶಿಷ್ಟ ಗೆರೆಗಳ ಮೂಲಕ ಖ್ಯಾತರಾಗಿದ್ದರು. ಸ್ಥಳದಲ್ಲೇ ಕ್ಯಾರಿಕೇಚರ್ ಬಿಡಿಸುವ, ಟಿ-ಶರ್ಟ್‌ನಲ್ಲಿ ಕ್ಯಾರಿಕೇಚರ್, ಕೌಟುಂಬಿಕ ಕ್ಯಾರಿಕೇಚರ್ ಮುಂತಾದ ವೈಶಿಷ್ಟ್ಯಗಳಿಂದಾಗಿ ಅವರು ಗಮನ ಸೆಳೆಯುತ್ತಿದ್ದು, ಈ-ಟಿವಿಯಲ್ಲಿ 'ಪ್ರಕಾಶ್ ಶೆಟ್ಟಿ ಪಂಚ್' ಎಂಬ ಕಾರ್ಯಕ್ರಮವೂ ಜನಮನ ತಣಿಸುತ್ತಿತ್ತು. |