ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಸಿಹಿತಿನಿಸು » ಬೀಟ್‌ರೂಟ್ ಖೀರು (Recipe in Kannada | Karnataka Recipe | Aduge | Savi Ruchi)
ಬೇಕಾಗುವ ವಸ್ತುಗಳು- ಒಂದು ಹದ ಗಾತ್ರದ ಬೀಟ್‌ರೂಟ್, 1 ಕಪ್ ಸಕ್ಕರೆ, ಅರ್ಧ ಲೀಟರ್ ಹಾಲು, ಒಂದು ಚಮಚ ಬಾದಾಮಿ ಎಸೆನ್ಸ್.

ಮಾಡುವ ವಿಧಾನ- ಬೀಟ್‌ರೂಟ್ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅದನ್ನು ಚೆನ್ನಾಗಿ ತುರಿಯಿರಿ. ಈ ತುರಿದ ಬೀಟ್‌ರೂಟನ್ನು ಹಾಲಿನಲ್ಲಿ ಮುಳುವಷ್ಟೇ ಹಾಲು ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ ಮೆತ್ತಗಾಗುವವ ಹಾಗೆ ಬೇಯಿಸಿ. ಉಳಿದ ಹಾಲನ್ನು ಬಿಸಿ ಮಾಡಿ. ಹಾಲಿನಲ್ಲಿ ಬೇಯಿಸಿದ ಬೀಟ್‌ರೂಟನ್ನು ಮಿಕ್ಸಿಯಲ್ಲಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಕುದಿಯುವ ಹಾಲಿಗೆ ಸೇರಿಸಿ. ಐದು ನಿಮಿಷ ಹಾಗೇ ಹದ ಉರಿಯಲ್ಲಿ ಸಿಮ್‌ನಲ್ಲಿಡಿ. ಸಕ್ಕರೆ ಹಾಗೂ ಹಾಲನ್ನು ಸೇರಿಸಿ. ಬಾದಾಮಿ ಎಸೆನ್ಸ್ ಸೇರಿಸಿ. ತಣಿಯಲು ಫ್ರಿಡ್ಜ್‌ನಲ್ಲಿಡಿ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು